ಉಡುಪಿ: ಯಕ್ಷಶಿಕ್ಷಣ ಅಧ್ಯಯನಕ್ಕೆ ಪೂರಕ; ಯಶಪಾಲ್ ಸುವರ್ಣ

ಉಡುಪಿ: ಯಕ್ಷಗಾನದಲ್ಲಿರುವ ಭಾವಾಭಿನಯ, ಮಾತುಗಾರಿಕೆ, ಬಣ್ಣ, ವೇಷಭೂಷಣ ಇತ್ಯಾದಿಗಳು ವಿದ್ಯಾರ್ಥಿಗಳಲ್ಲಿ ಸಭಾ ಕಂಪನವನ್ನು ದೂರ ಮಾಡಿ ಅವಧಾನ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಶಾಲಾ ದಿನಗಳಲ್ಲಿ ಯಕ್ಷಗಾನದಂತಹ ಕಲಾಶಿಕ್ಷಣವನ್ನು ಪಡೆಯುವುದು ಹೆಚ್ಚು ಸೂಕ್ತ. ಅದು ಶಿಕ್ಷಣಕ್ಕೆ ಪೂರಕ ಹೊರತು ಮಾರಕವಲ್ಲ ಎಂದು ಉಡುಪಿ ವಿಧಾನಸಭಾ ಸದಸ್ಯ ಹಾಗೂ ಯಕ್ಷಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರೂ ಆದ ಯಶ್ ಪಾಲ್ ಸುವರ್ಣ ಅಭಿಪ್ರಾಯಪಟ್ಟರು. ಅವರು ಉಡುಪಿ ಯಕ್ಷಗಾನ ಕಲಾರಂಗದ ಸಹಯೋಗದೊಂದಿಗೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆಯಲಿರುವ […]