ಉಡುಪಿ: ಕಾರ್ಮಿಕರ ನಡುವೆ ಹೊಡೆದಾಟ; ಹಲವರು ಪೊಲೀಸ್ ವಶಕ್ಕೆ

ಉಡುಪಿ: ಉಡುಪಿಗೆ ಕೂಲಿ ಕೆಲಸಕ್ಕಾಗಿ ಹೊರರಾಜ್ಯದಿಂದ ಬಂದ ಕಾರ್ಮಿಕರ ತಂಡವು ಪರಸ್ಪರ ಬಡಿದಾಡಿಕೊಂಡ ಘಟನೆ ನಡೆದಿದೆ.ನಗರದ ಪುತ್ತೂರು ನಯಂಪಳ್ಳಿ ಸ್ವರ್ಣ ನದಿ ಸೇತುವೆ ಸಮೀಪದ ಎಪಿಜಿ ಲೇಬರ್ ಕಾಲನಿಯಲ್ಲಿ ಗಲಾಟೆ ಮಾಡಿಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸಿದ್ದ ತಂಡದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೈಪ್‌ಲೈನ್ ಕಾಮಗಾರಿಗಾಗಿ ಛತ್ತೀಸಗಡದಿಂದ ಉಡುಪಿಗೆ ಬಂದಿದ್ದ ಈ ಯುವಕರು ಯಾವುದೋ ಕಾರಣಕ್ಕೆ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ್ದ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದು, ಪೊಲೀಸರು ಬರುವಷ್ಟರಲ್ಲಿ ಗಲಾಟೆ ನಿಲ್ಲಿಸಿದ್ದಾರೆ. ಕ್ಷುಲ್ಲಕ […]