ಉಡುಪಿ: ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆಯ ಆಮಿಷ: ಆನ್‌ಲೈನ್‌ನಲ್ಲಿ ಲಕ್ಷಾಂತರ ರೂ. ವಂಚನೆ.

ಉಡುಪಿ: ಹೆಚ್ಚಿನ ಲಾಭಾಂಶದ ಆಸೆ ತೋರಿಸಿ, ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿಸುವ ಮೂಲಕ ಮೂಡುಬೆಳ್ಳೆಯ ಯುವಕನೋರ್ವ ಆನ್‌ಲೈನ್‌ನಲ್ಲಿ 49ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಮೂಡುಬೆಳ್ಳೆಯ ಫ್ರಾನ್ಸಿಸ್ ಕಾಸ್ತಲಿನೋ ಇವರ ಮಗನ ಮೊಬೈಲ್ ನಂಬರ್‌ನ್ನು ಯಾರೋ ಅಪರಿಚತರು ಸ್ಟಾಕ್‌ಮಾರ್ಕೆಟ್ ನೇವಿಗೇಷನ್ ಎಂಬ ವಾಟ್ಸಪ್ ಗ್ರೂಪ್‌ಗೆ ಸೇರಿಸಿದ್ದು ಇದರ ಮೂಲಕ ಶೇರು ಮಾರುಕಟ್ಟೆ ಹಾಗೂ ಅದರಿಂದ ಸಿಗುವ ಲಾಭಾಂಶಗಳ ಬಗ್ಗೆ ಆಸೆ ತೋರಿಸಿ ಹಣವನ್ನು ಹೂಡಿಕೆ ಮಾಡುವಂತೆ ಅಮಿಷ ಒಡ್ಡಿದ್ದರು. ಅವರ ಬಲೆಗೆ ಬಿದ್ದ ಯುವಕ, ಅಪರಿಚಿತರು ಸೂಚಿಸಿದ […]