ರಾಜ್ಯದಲ್ಲಿ ‘ಲಿಕ್ವಿಡ್ ನೈಟ್ರೋಜನ್’ ಬಳಸುವುದು ನಿಷೇಧ: ರಾಜ್ಯ ಸರ್ಕಾರ ಆದೇಶ.
ಬೆಂಗಳೂರು: ರಾಜ್ಯದಲ್ಲಿ ಆಹಾರ ಪದಾರ್ಥಗಳ ವಿತರಣೆಯಲ್ಲಿ ‘ಲಿಕ್ವಿಡ್ ನೈಟ್ರೋಜನ್’ ಬಳಸುವುದು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಸ್ಮೋಕಿಂಗ್ ಬಿಸ್ಕತ್ ಅಥವಾ ಡೆಸರ್ಟ್ಸ್ ಹಾಗೂ ಇತರೆ ತಿನಿಸುಗಳನ್ನು ಸೇವನೆಗಾಗಿ ಗ್ರಾಹಕರಿಗೆ ಒದಗಿಸುವ ಸಂದರ್ಭದಲ್ಲಿ ಲಿಕ್ವಿಡ್ ನೈಟ್ರೋಜನ್ (ದ್ರವ ಸಾರಜನಕ) ಬಳಸುವುದನ್ನು ನಿರ್ಬಂಧಿಸಲಾಗಿದೆ.ಸಾರ್ವಜನಿಕರ ಹಿತದೃಷ್ಟಿಯಿಂದ ಇದೀಗ ಮತ್ತೊಮ್ಮೆ ಪ್ರಕಟಣೆ ನೀಡಲಾಗಿದೆ. ಈ ಕುರಿತು ಮೇ 3ರಂದು ಆದೇಶಿಸಲಾಗಿದ್ದು, ಅಗತ್ಯ ಪ್ರಕಟಣೆಯನ್ನು ಹೊರಡಿಸಲಾಗಿತ್ತು. ಆದೇಶವನ್ನು ಉಲ್ಲಂಘಿಸಿದಲ್ಲಿ ಆಹಾರ ತಯಾರಕರ ವಿರುದ್ಧ 7 ವರ್ಷ ಜೀವಾವಧಿ ಶಿಕ್ಷೆ ಹಾಗೂ […]