ಉಡುಪಿ: ಬಿ.ಆರ್. ಕಂಪೆನಿಯ ಆಸ್ಪತ್ರೆ ನಿರ್ಮಾಣಕ್ಕೆ ತೆಗೆದ ಗುಂಡಿ ಮುಚ್ಚುವಂತೆ ಆಗ್ರಹ

ಉಡುಪಿ: ಅರ್ಧಕ್ಕೆ ಸ್ಥಗಿತಗೊಂಡಿರುವ ಉಡುಪಿ ನಗರದ ಹೃದಯಭಾಗದ ಕೆ.ಎಂ.ಮಾರ್ಗದಲ್ಲಿರುವ ಬಿ.ಆರ್. ಕಂಪೆನಿಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ ತೆಗೆದಿರುವ ಬಹೃತ್ ಗುಂಡಿಯನ್ನು ಮುಚ್ಚುವಂತೆ ಆಗ್ರಹಿಸಿ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಇಂದು ವಿನೂತನವಾದ ಅಪಾಯಕಾರಿ ಪ್ರತಿಭಟನೆ ನಡೆಸಿದರು. ಕ್ರೇನ್ ಮೂಲಕ ಮಳೆ ನೀರು ತುಂಬಿರುವ ಅಪಾಯಕಾರಿ ಗುಂಡಿಯ ನೀರಿನ ಮಟ್ಟದವರೆಗೆ ಇಳಿದ ಒಳಕಾಡು ಅವರು, ಎಚ್ಚರಿಕೆಯ ಫಲಕವನ್ನು ನೀರಿನಲ್ಲಿ ತೇಲಿಬಿಟ್ಟರು. ಉಡುಪಿ ನಾಗರಿಕ ಸಮಿತಿಯ ನೇತೃತ್ವದಲ್ಲಿ ಈ ವಿನೂತನ ಪ್ರತಿಭಟನೆ ನಡೆಯಿತು. ತಮಟೆ, ಎಚ್ಚರಿಕೆಯ […]