ಮಂಗಳೂರು: “ಸ್ನೇಹಾಲಯ ಡಿ-ಅಡಿಕ್ಷನ್ ಸೆಂಟರ್” ಉದ್ಘಾಟನೆ

ಮಂಗಳೂರು: ಮಹಾತ್ಮಾ ಗಾಂಧೀಜಿಯವರ ಜನ್ಮದಿನದಂದು, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್, ಬಾಚಳಿಕೆ, ಪಾವೂರು, ಮಂಜೇಶ್ವರ ಇವರು, ಅ.2, 2024 ರಂದು, ಸಾರ್ವಜನಿಕರಿಗಾಗಿ ತಮ್ಮ ಹೊಸ ಸೇವಾ ಸಂಸ್ಥೆಯಾದ ಸ್ನೇಹಾಲಯ ಡಿ-ಅಡಿಕ್ಷನ್ ಸೆಂಟರನ್ನು ಉದ್ಘಾಟಿಸಿ ಲೋಕಾರ್ಪಣೆ ಮಾಡಲಾಯಿತು. ವ್ಯಸನದ ವಿರುದ್ಧ ಹೋರಾಡುವ ಮತ್ತು ವ್ಯಸನಕ್ಕೆ ಒಳಗಾದವರ ಪುನರ್ವಸತಿಯನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿ, ಸ್ನೇಹಾಲಯ ಡೆಡಿಕ್ಷನ್ ಸೆಂಟರ್ ಅನ್ನು ಗೌರವಾನ್ವಿತ ಗಣ್ಯರು, ದಾನಿಗಳು ಮತ್ತು ಸಾಮಾಜಿಕ ಮತ್ತು ಸಮುದಾಯದ ಮುಖಂಡರ ಉಪಸ್ಥಿತಿಯಲ್ಲಿ, ಪ್ರಖ್ಯಾತ ದಾನಿ ಮತ್ತು ಯಶಸ್ವಿ ಉದ್ಯಮಿಗಳಾದ ಮೈಕಲ್ ಡಿಸೋಜಾ […]