ಎಸ್ ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ; ಉಡುಪಿ ಶಾಖೆ ಹಿರಿಯ ಶಾಖಾ ವ್ಯವಸ್ಥಾಪಕ ಲಕ್ಷ್ಮೀ ನಾರಾಯಣ. ಬಿ. ಆಚಾರ್ ಅವರಿಗೆ ಬೀಳ್ಕೊಡುಗೆ ಸಮಾರಂಭ.

ಉಡುಪಿ: ಎಸ್ ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ಉಡುಪಿ ಶಾಖೆಯ ಹಿರಿಯ ಶಾಖಾ ವ್ಯವಸ್ಥಾಪಕರಾದ ಲಕ್ಷ್ಮೀ ನಾರಾಯಣ. ಬಿ. ಆಚಾರ್, ಇವರು 41 ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿ, ದಿನಾಂಕ 31-05 -2025 ರಂದು ನಿವೃತ್ತಿಗೊಂಡಿದ್ದರು. ಇವರ ಬೀಳ್ಕೊಡುಗೆ ಸಮಾರಂಭವು ವುಡ್ ಲ್ಯಾಂಡ್ ಹೋಟೆಲ್ ನ ಸಭಾಭವನದಲ್ಲಿ ಸೊಸೈಟಿಯ ಅಧ್ಯಕ್ಷರಾದ ಪಿ. ಉಪೇಂದ್ರ ಆಚಾರ್ಯರ ಅಧ್ಯಕ್ಷತೆಯಲ್ಲಿ ನೆರವೇರಿತು. ನಿವೃತ್ತಿ ಎಂಬುದು ವೃತ್ತಿಗಷ್ಟೇ ವಿನಃ ಪ್ರವೃತ್ತಿಗಲ್ಲ ಎಂಬ ಮಾತಿನೊಂದಿಗೆ […]