ಉಡುಪಿ:ಕನ್ನಡ ವೈಚಾರಿಕ ಚಿಂತನೆಗೆ ಕಾರಂತರ ಕೊಡುಗೆ ಅಪೂರ್ವ: ಡಾ.ಸುಧಾಕರ ದೇವಾಡಿಗ

ಉಡುಪಿ: 20 ನೇ ಶತಮಾನದ ಭಾರತೀಯ ಸಾಹಿತ್ಯದಲ್ಲಿ ಡಾ.ಶಿವರಾಮ ಕಾರಂತರು ಸದಾಸ್ಮರಣೀಯರು.ಸಾಹಿತ್ಯ ಮತ್ತು ಸಂಸ್ಕೃತಿಯ ಎಲ್ಲಾ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದವರು. ಅವರು ತಮ್ಮ ಬರಹಗಳ ಮೂಲಕ ಕನ್ನಡ ವೈಚಾರಿಕ ಚಿಂತನೆಗೆ ನೀಡಿದ ಕೊಡುಗೆ ಅಪೂರ್ವವಾದದ್ದು ಎಂದು ಚಿಂತಕ ಡಾ.ಸುಧಾಕರ ದೇವಾಡಿಗ ಬಿ ಹೇಳಿದರು. ಅವರು ಶುಕ್ರವಾರ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅರಿವಿನ ಬೆಳಕು: […]