ಉಡುಪಿ:ಶೀರೂರು ಪರ್ಯಾಯ: ಕೃಷ್ಣಮಠಕ್ಕಿದು 253ನೇ ಪರ್ಯಾಯ; ಪರ್ಯಾಯ ವ್ಯವಸ್ಥೆಗೆ 504 ವರ್ಷಗಳ ಇತಿಹಾಸ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಜ. 18ರಂದು ನಡೆಯುವ ಪರ್ಯಾಯೋತ್ಸವದಲ್ಲಿ ಶ್ರೀ ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರು ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ಇದು ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ 253ನೆಯ ದ್ವೈವಾರ್ಷಿಕ ಪರ್ಯಾಯೋತ್ಸವ. ಶ್ರೀಮಧ್ವಾಚಾರ್ಯರು (1238-1317) ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಎರಡೆರಡು ತಿಂಗಳ (ದ್ವೈಮಾಸಿಕ ಪದ್ಧತಿ) ಅವಧಿ ಸರತಿ ಪೂಜೆಯ ವ್ಯವಸ್ಥೆಯನ್ನು ಕಲ್ಪಿಸಿದ್ದರು. ವಾದಿರಾಜ ಗುರುಸಾರ್ವಭೌಮರು (1481-1601) ಎರಡು ವರ್ಷಗಳ (ದ್ವೈವಾರ್ಷಿಕ) ಪೂಜಾ ವ್ಯವಸ್ಥೆಗೆ ಅವಧಿ ವಿಸ್ತರಿಸಿದರು. 1522ರಲ್ಲಿ ಆರಂಭಗೊಂಡ ಎರಡು ವರ್ಷಗಳ ಪರ್ಯಾಯ ಪೂಜಾ ಪದ್ಧತಿ ಐದನೆಯ […]