ಆ.27ರಂದು ಉಡುಪಿ ಶಿರೂರು ಮಠದ ಮುಂಭಾಗದಲ್ಲಿ ಹುಲಿವೇಷ, ಜಾನಪದ ನೃತ್ಯ ಕಾರ್ಯಕ್ರಮ

ಉಡುಪಿ: ಶಿರೂರು ಪೀಠಾಧಿಪತಿಗಳಾದ ವೇದವರ್ಧನ ತೀರ್ಥ ಶ್ರೀಪಾದರು, ಕೀರ್ತಿಶೇಷ ಲಕ್ಷ್ಮೀವರತೀರ್ಥ ಶ್ರೀಪಾದರು ವಿಟ್ಲಪಿಂಡಿ ಮಹೋತ್ಸವದಂದು ನಡೆಸಿಕೊಂಡು ಬಂದಂತಹ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಶಿರೂರು ಮಠದ ಮುಂಭಾಗದ ಅನ್ನವಿಠಲ್ ವೇದಿಕೆಯಲ್ಲಿ ಈ ಬಾರಿಯು ಆಯೋಜಿಸಲು ಸಂಕಲ್ಪಿಸಿದ್ದಾರೆ ಎಂದು ಮಠದ ದಿವಾನ ಉದಯಕುಮಾರ್ ಸರಳತ್ತಾಯ ಹೇಳಿದರು. ಉಡುಪಿ ಶಿರೂರು ಮಠದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಕೃಷ್ಣಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವದಂದು ಕೀರ್ತಿಶೇಷ ಲಕ್ಷ್ಮೀವರತೀರ್ಥ ಶ್ರೀಪಾದರು ಉಡುಪಿಯ ಜನತೆಗೆ ಶ್ರೀ ಕೃಷ್ಣ ಮಠದ ರಥಬೀದಿಯ ಶಿರೂರು ಮಠದ […]