“ಉಡುಪಿ ಶೈನಿಂಗ್ ಸ್ಟಾರ್” ಆಗಲು ಇಲ್ಲಿದೆ ಸುವರ್ಣಾವಕಾಶ: ಹಾಡುವವರಿಗೆ ಒಂದು ಭರ್ಜರಿ ಗಾಯನ ಸ್ಪರ್ಧೆ

ಉಡುಪಿ‍XPRESS ನ್ಯೂಸ್:  ಮಣಿಪಾಲ ಮಹಿಳಾ ಸಮಾಜ, ಹಾಡುವ ಪ್ರತಿಭೆಗಳಿಗೆ “ಉಡುಪಿ ಶೈನಿಂಗ್ ಸ್ಟಾರ್ “ಎನ್ನುವ  ಆನ್ಲೈನ್ ಸಂಗೀತ ಸ್ಪರ್ಧೆ ಆಯೋಜಿಸಿದ್ದು ಉಡುಪಿ ಶೈನಿಂಗ್ ಸ್ಟಾರ್  ಆಗುವ ಕನಸಿರುವವರಿಗೆ ಸುವರ್ಣಾವಕಾಶ ನೀಡಿದೆ. ಈಗಾಗಲೇ ಆನ್ಲೈನ್ ಗಾಯನ ಸ್ಪರ್ಧೆಗೆ ನೋಂದಣಿ ಆರಂಭವಾಗಿದ್ದು, ಜೂ.30 ರವರೆಗೆ ನೋಂದಣಿಗೆ ಅವಕಾಶ ನೀಡಲಾಗಿದೆ. ಯಾರು ಭಾಗವಹಿಸಬಹುದು? ಅಂದಹಾಗೆ ಈ ಸ್ಪರ್ಧೆಗೆ ಉಡುಪಿ ಜಿಲ್ಲೆಯವರಿಗೆ ಭಾಗವಹಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದ್ದು,8-16  ವರ್ಷ ವಯೋಮಾನದವರಿಗೆ ಭಾಗವಹಿಸಲು ಮಾತ್ರ ಅವಕಾಶವಿದೆ. ಈಗಾಗಲೇ ಸಂಗೀತ ಕ್ಷೇತ್ರದಲ್ಲಿ ಖ್ಯಾತರಾದ ಪ್ರಸಿದ್ದರಿಗೆ ಇಲ್ಲಿ ಅವಕಾಶವಿಲ್ಲ. […]