ಉಡುಪಿ: ಬಸ್ ನಿಲ್ದಾಣದಲ್ಲಿ ಹಣ ಯಾಚಿಸುತ್ತಿದ್ದ ‘ನಾಪತ್ತೆಯಾಗಿದ್ದ’ ಬಾಲಕನ ರಕ್ಷಣೆ

ಉಡುಪಿ: ಸರ್ವಿಸ್ ಬಸ್ಸು ನಿಲ್ದಾಣದಲ್ಲಿ ಶಾಲಾ ಸಮವಸ್ತ್ರದಲ್ಲಿದ್ದ ಬಾಲಕನ ಅನುಮಾನಸ್ಪದ ಚಲನವಲನ ಗಮನಿಸಿದ ಸಮಾಜಸೇವಕ ನಿತ್ಯಾನಂದ ಒಳಕಾಡು, ಬಾಲಕನನ್ನು ವಶಕ್ಕೆ ಪಡೆದು, ಬಳಿಕ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿರುವ ಘಟನೆ ಇಂದು ಸಂಭವಿಸಿದೆ. ರಕ್ಷಿಸಲ್ಪಟ್ಟ ಬಾಲಕ ದೊಡ್ಡಣಗುಡ್ಡೆಯ ಬಾಲಕರ ಬಾಲ ಭವನದಲ್ಲಿ ಆಶ್ರಯದಲ್ಲಿದ್ದವನು, ನಿಟ್ಟೂರಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 3ನೇ ತರಗತಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಬಾಲಕರ ಭವನದಿಂದ ಶಾಲೆಗೆಂದು ತೆರಳಿದ ಬಾಲಕ ಶಾಲೆಗೆ ಹೋಗದೆ, ಮರಳಿ ಬಾಲಕರ ಭವನಕ್ಕೂ ಬಾರದೆ ನಾಪತ್ತೆಯಾಗಿದ್ದ. ಬಾಲಕ ಕಾಣೆಯಾಗಿರುವ […]