ಉಡುಪಿ: ಮೇ.14ರಂದು ಉನ್ನತಿ ಕೆರಿಯರ್ ನಲ್ಲಿ ಉದ್ಯೋಗಾವಕಾಶಗಳ ಕುರಿತ ವಿಚಾರ ಸಂಕಿರಣ

ಉಡುಪಿ: ಉಡುಪಿಯ ಪಿಪಿಸಿ 1ನೇ ಅಡ್ಡರಸ್ತೆಯಲ್ಲಿರುವ ಉನ್ನತಿ ಕೆರಿಯರ್ ಅಕಾಡೆಮಿ ಕ್ಯಾಂಪಸ್ ನಲ್ಲಿ ಮೇ 14.ರಂದು ಶನಿವಾರ ಬೆಳಿಗ್ಗೆ 10.30ರಿಂದ 11.45ರ ತನಕ “ಬ್ಯಾಂಕಿಂಗ್, ಫೈನಾನ್ಶಿಯಲ್ ಮತ್ತು ಇನ್ಸುರೆನ್ಸ್ ಕ್ಷೇತ್ರದ ಭವಿಷ್ಯ ಹಾಗೂ ಉದ್ಯೋಗಾವಕಾಶಗಳು” ವಿಚಾರ ಸಂಕಿರಣ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಮಣಿಪಾಲ್ ಬಿಸಿನೆಸ್ ಸೊಲ್ಯೂಷನ್ಸ್ ನ ಆಪರೇಶನ್ಸ್ ಮ್ಯಾನೇಜರ್ ಶ್ರೀಮತಿ ಆರತಿ ರವರು ಭಾಗವಹಿಸಲಿದ್ದಾರೆ. ಈ ವಿಚಾರ ಸಂಕಿರಣದಲ್ಲಿ 18ರಿಂದ 35 ವರ್ಷದೊಳಗಿನ ಆಸಕ್ತ ಯುವಕ- ಯುವತಿಯರು https://unnathi.careers/bfsi-seminar/ ಲಿಂಕ್ ಮೂಲಕ ನೋಂದಣಿ ಮಾಡಿ ಭಾಗವಹಿಸಬಹುದಾಗಿದೆ. […]