ಉಡುಪಿ: ದಲಿತರಿಗೆ ಜಿಲ್ಲಾಡಳಿತದಿಂದ ಅಸಹಕಾರ – ದಿನಕರ್ ಬಾಬು

ಉಡುಪಿ: ಜಿಲ್ಲಾಧಿಕಾರಿಯವರು ಒಳ ಮೀಸಲಾತಿ ಕುರಿತಾದ ಸಭೆಯನ್ನು ಕೇವಲ ಸೀಮಿತ ದಲಿತ ನಾಯಕರನ್ನು ಕರೆದು ಮಾಡುತ್ತಿರುದು ಇಡೀ ದಲಿತ ಸುಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ಇದರಿಂದ ಒಳ ಮೀಸಲಾತಿಯ ಬಗ್ಗೆ ಮಾಹಿತಿ ಪಡೆಯಲು ಅವಕಾಶ ಇರುವುದಿಲ್ಲ ಎಂದು ರಾಜ್ಯ ಎಸ್ ಸಿ ಮೋರ್ಚಾ ದ ಉಪಾಧ್ಯಕ್ಷ ದಿನಕರ್ ಬಾಬು ತಿಳಿಸಿದ್ದಾರೆ. ಇದರ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಮನವರಿಕೆ ಮಾಡಲು ಸಾಕಷ್ಟು ಬಾರಿ ಫೋನ್ ಕರೆ ಮಾಡಿದರು ಸ್ಪಂದನೆ ಸಿಕ್ಕಿಲ್ಲ. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಸರಿಯಾದ ಮಾಹಿತಿ ಕೊಡುತ್ತಿಲ್ಲ. […]