ಸಗ್ರಿನೊಳೆ ಹತ್ತಿರದ ಕಿರುಸೇತುವೆ ಕುಸಿತ; ಉಡುಪಿ ನಗರಕ್ಕೆ ಬರುವ ಒಳ ದಾರಿ ಬಂದ್

ಉಡುಪಿ: ಈ ವರ್ಷ ಭಾರೀ ಮಳೆಯಾಗಿದ್ದು ಅನೇಕ ಅವಾಂತರ ಸೃಷ್ಟಿ ಮಾಡಿದೆ. ಮಳೆಯ ರಭಸಕ್ಕೆ ಸಣ್ಣ ಪುಟ್ಟ ಸೇತುವೆಗಳು ಕುಸಿದು ರಸ್ತೆ ಸಂಚಾರ ಬಂದ್ ಆಗಿದ್ದವು. ಉಡುಪಿ ನಗರಕ್ಕೆ ಬರುವ ಒಳದಾರಿಯ ಪೈಕಿ ಸಗ್ರಿ ನೊಳೆಯ ಹತ್ತಿರದ ಕಿರು ಸೇತುವೆ ಕುಸಿದಿದ್ದು ಸಂಚಾರಕ್ಕೆ ತೊಡಕುಂಟಾಗಿದೆ. ದೊಡ್ಡಣಗುಡ್ಡೆಯಿಂದ ಒಳದಾರಿಯಾಗಿ ಎಂಜಿಎಂ ಕಾಲೇಜು ಸಂಪರ್ಕಿಸುವ ರಸ್ತೆಯ ಚಕ್ರತೀರ್ಥ ಎಂಬಲ್ಲಿನ ಕಿರುಸೇತುವೆ ಇತ್ತೀಚಿಗೆ ಕುಸಿದು ಇದೀಗ ರಸ್ತೆ ಸಂಚಾರ ಬಂದ್ ಆಗಿದೆ. ಇದೀಗ ಪೆರಂಪಳ್ಳಿ- ಸಗ್ರಿಯಿಂದ ಇಂದ್ರಾಳಿ , ಉಡುಪಿಗೆ ಸಂಪರ್ಕಿಸುವ […]