ಉಡುಪಿ: ರಸ್ತೆ ಬದಿ ತ್ಯಾಜ್ಯ ಎಸೆದ ವ್ಯಕ್ತಿಯಿಂದಲೇ ತೆರವುಗೊಳಿಸಿದ ಗ್ರಾಪಂ ಅಧ್ಯಕ್ಷೆ

ಉಡುಪಿ: ಮನೆಯ ತ್ಯಾಜ್ಯವನ್ನು ವಾಹನದಲ್ಲಿ ತಂದು ಹೊಳೆಬದಿಗೆ ಸುರಿದ ಬೇಜವಾಬ್ದಾರಿ ವ್ಯಕ್ತಿಯಿಂದಲೇ ಅದನ್ನು ಹೆಕ್ಕಿಸಿ, ಆತನನ್ನು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವಂತೆ ಮಾಡಿದ ಘಟನೆ ಇಲ್ಲಿನ ಇನ್ನಂಜೆ ಗ್ರಾಪಂನಲ್ಲಿ ನಡೆದಿದೆ. ಆರೋಪಿ ವ್ಯಕ್ತಿ ತಮ್ಮ ಮನೆಯ ಕಸಮುಸುರೆಗಳನ್ನು ಬೆಳಗಿನ ಜಾವ ವಾಹನದಲ್ಲಿ ತಂದು ಇನ್ನಂಜೆಯ ಮರ್ಕೋಡಿ ಹೊಳೆ ಬದಿಗೆ ಸುರಿದು ಹೋಗುತ್ತಿದ್ದ. ಈ ಬಗ್ಗೆ ಸ್ಥಳೀಯರು ಗ್ರಾಪಂ ಅಧ್ಯಕ್ಷೆ ಮಾಲಿನಿ ಶೆಟ್ಟಿ ಗಮನಕ್ಕೆ ತಂದಿದ್ದರು. ಅವರು ಸ್ಥಳೀಯ ಗ್ರಾಪಂ ಸದಸ್ಯರೊಂದಿಗೆ ಸ್ಥಳಕ್ಕೆ ಆಗಮಿಸಿ, ಅಲ್ಲಿ ಎಸೆಯಲಾಗಿದ್ದ ತ್ಯಾಜ್ಯದಲ್ಲಿದ್ದ […]