ಉಡುಪಿ: ನಿವೃತ್ತ ಶಿಕ್ಷಕ ನಾಪತ್ತೆ

ಉಡುಪಿ: ನಿವೃತ್ತ ಶಿಕ್ಷಕರಾಗಿದ್ದ ಉಡುಪಿ ತಾಲೂಕು ಕುಕ್ಕೆಹಳ್ಳಿ ಗ್ರಾಮದ ನಿವಾಸಿ ಸರ್ವೋತ್ತಮ ಹೆಗ್ಡೆ (79) ಎಂಬ ವೃದ್ಧರು ಜೂನ್ 16 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದು, ಕುಂದಾಪುರ ತಾಲೂಕಿನ ವಂಡ್ಸೆ ಚಕ್ರಾ ಹೊಳೆಯ ಬಳಿ ಸದ್ರಿ ವ್ಯಕ್ತಿಗೆ ಸಂಬಂಧಿಸಿದ ಚಪ್ಪಲಿ, ವಾಚ್, ಬಸ್ ಟಿಕೆಟ್ ಹಾಗೂ ಮೊಬೈಲ್ ಪತ್ತೆಯಾಗಿರುತ್ತದೆ. 5 ಅಡಿ 6 ಇಂಚು ಎತ್ತರ, ಸಾಧಾರಣ ಶರೀರ, ಅಂಡಾಕೃತಿ ಮುಖ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. […]