ಉಡುಪಿ: ಸಿಟಿ ಗೇಟ್‌ವೇ ಅಪಾರ್ಟ್‌ಮೆಂಟ್ಸ್ ಕಟ್ಟಡ ಸಂಕೀರ್ಣದ ವಾರ್ಷಿಕ ಮಹಾಸಭೆ – ನೂತನ ಸದಸ್ಯರ ನೇಮಕ

ಉಡುಪಿ, ಆಗಸ್ಟ್ 25: ನಗರದ ಮಿಷನ್ ಕಾಂಪೌಂಡ್ ಬಳಿ ಇರುವ ಸಿಟಿ ಗೇಟ್‌ವೇ ಅಪಾರ್ಟ್‌ಮೆಂಟ್ಸ್ ಕಟ್ಟಡ ಸಂಕೀರ್ಣದ ಸಂಘದ ವಾರ್ಷಿಕ ಮಹಾಸಭೆಯು ಆಗಸ್ಟ್ 25ರ ಭಾನುವಾರ ಕಟ್ಟಡದ ಆವರಣದಲ್ಲಿಯೇ ಇರುವ ಸಭಾಗೃಹದಲ್ಲಿ ನೆರವೇರಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರೇ ಆಗಿರುವ ಶ್ರೀ ಇಕ್ಬಾಲ್ ಹಮ್ಮಾಜಿಯವರು ವಹಿಸಿದ್ದರು ಹಾಗೂ ಸದಸ್ಯರನ್ನು ಸ್ವಾಗತಿಸಿ ಸಭೆಯನ್ನು ಪ್ರಾರಂಭಿಸಿದರು. ಸಂಘದ ಕಾರ್ಯದರ್ಶಿಯವರಾದ ಶ್ರೀಮತಿ ಪ್ರಮಿಳಾ ಜತ್ತನ್ನರವರು ಹಿಂದಿನ ಮಹಾಸಭೆಯ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಆ ಬಳಿಕ ಸಂಘದ ಖಜಾಂಚಿಯಾಗಿರುವ ಶ್ರೀಮತಿ ರೇಶ್ಮಾರವರು ಹಿಂದಿನ […]