ಎ.18ರಂದು ಯಕ್ಷಗಾನ ಸಿನಿಮಾ “ವೀರ ಚಂದ್ರಹಾಸ’ ರಾಜ್ಯಾದ್ಯಂತ ಬಿಡುಗಡೆ- ರವಿ ಬಸ್ರೂರು

ಉಡುಪಿ: ಯಕ್ಷಗಾನವನ್ನು ವಿಸ್ತಾರಗೊಳಿಸುವ ಉದ್ದೇಶದೊಂದಿಗೆ ಪರಿಶ್ರಮ ತಂಡದ ನೇತೃತ್ವದಲ್ಲಿ ನಿರ್ಮಿಸಿರುವ ಬಹುನಿರೀಕ್ಷಿತ ‘ವೀರ ಚಂದ್ರಹಾಸ’ ಸಿನಿಮಾವನ್ನು ಎ.18ರಂದು ಏಕ ಕಾಲದಲ್ಲಿ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಿನಿಮಾದ ನಿರ್ದೇಶಕ, ಸಂಗೀತ ನಿರ್ದೇಶಕ ರವಿ ಬಸ್ರೂರು ತಿಳಿಸಿದ್ದಾರೆ. ಕುಂಭಾಶಿಯ ಆನೆಗುಡ್ಡೆ ವಿನಾಯಕ ದೇವಸ್ಥಾನದ ವಠಾರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಚಿತ್ರದಲ್ಲಿ ಬಹುತೇಕ ಪಾತ್ರಗಳನ್ನು ವೃತ್ತಿಪರ ಯಕ್ಷಗಾನ ಕಲಾವಿದರೇ ನಿರ್ವಹಿಸಿದ್ದಾರೆ. ಸುಮಾರು 400ರಿಂದ 500 ಪಾತ್ರಧಾರಿಗಳು ಸಿನಿಮಾದ ದೃಶ್ಯಾವಳಿಗಳಲ್ಲಿ ಅಭಿನಯಿಸಿದ್ದಾರೆ. ಪ್ರಸಿದ್ಧ ಭಾಗವತರಾದ ಪಟ್ಲ, […]