ಉಡುಪಿ ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್ ಕೊರತೆ: ಸ್ವಯಂ ಸೇವಕರಾಗಿ ಬರುವಂತೆ ಯುವಕರಿಗೆ ಶಾಸಕ ರಘುಪತಿ ಭಟ್ ಕರೆ

ಉಡುಪಿ: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಇದರಿಂದ ಕೊರೊನಾ ವಿರುದ್ಧ ಹೋರಾಡುವ ವಾರಿಯರ್ಸ್ ಗಳ ಕೊರತೆ ಎದುರಾಗಿದೆ. ಜಿಲ್ಲೆಯಲ್ಲಿ 749 ವೈದ್ಯಕೀಯ ಸಿಬ್ಬಂದಿ ಹುದ್ದೆ ಖಾಲಿ ಇದೆ. ಹಾಗಾಗಿ ಆರೋಗ್ಯವಂತ ಯುವಕರು ಸ್ವಯಂ ಸೇವಕರಾಗಿ ಬರುವಂತೆ ಉಡುಪಿ ಶಾಸಕ ಕೆ. ರಘುಪತಿ ಭಟ್ ಮನವಿ ಮಾಡಿದ್ದಾರೆ.