ಭಾರತೀಯ ವಾಯುಸೇನೆಗೆ ರಫೆಲ್ ಯುದ್ಧ ವಿಮಾನ ಸೇರ್ಪಡೆ: ಉಡುಪಿಯಲ್ಲಿ ನಾಗರಿಕ ಸಮಿತಿಯಿಂದ ಸಂಭ್ರಮಾಚರಣೆ

ಉಡುಪಿ: ಭಾರತೀಯ ವಾಯು ಸೇನೆಗೆ ನೂತನ ಐದು ರೆಫೆಲ್ ಯುದ್ಧ ವಿಮಾನಗಳು ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಸಂಭ್ರಮಾಚರಣೆ ಕಾರ್ಯಕ್ರಮವು ನಗರದ ಮಾರುಥಿ ವೀಥಿಕಾದಲ್ಲಿ ಇಂದು ನಡೆಯಿತು. 20 ×14 ಅಡಿ ಸುತ್ತಳತೆಯ ಬೃಹತ್ ಗಾತ್ರದ ರಾಷ್ಟಧ್ವಜ ಪ್ರದರ್ಶಿಸುವ ಮೂಲಕ ದೇಶದ ಸಾಧನೆಗೆ ಗೌರವ ಸಮರ್ಪಣೆ ನಡೆಸಲಾಯಿತು. ‘ಉಡುಪಿ ಸ್ವಿಟ್ಸ್ ಕಲ್ಸಂಕ’ ಮಳಿಗೆಯ, ಸಿಹಿ ಖಾದ್ಯ ತಯಾರಕರ ತಂಡವು, ಸ್ಥಳದಲ್ಲಿ ತಯಾರಿಸಿದ ಬಿಸಿ ಬಿಸಿ ಜಿಲೇಬಿಯನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ದೇಶದ ಶಕ್ತಿ ಬಲಿಷ್ಠಗೊಳಿಸಲು ಭಾರತ […]