ಮಾ.23ರಂದು ಸ್ತ್ರೀವೇಷಧಾರಿ ಸಂತೋಷ್ ಹಿಲಿಯಾಣ ಅವರಿಗೆ ಸಾರ್ವಜನಿಕ ಅಭಿನಂದನೆ

ಉಡುಪಿ: ಯಕ್ಷಗಾನ ರಂಗದಲ್ಲಿ 25 ವರ್ಷಗಳ ಕಲಾ ಸೇವೆಯನ್ನು ಪೂರ್ಣಗೊಳಿಸಿರುವ ಹನುಮಗಿರಿ ಮೇಳದ ಪ್ರದಾನ ಸ್ತ್ರೀವೇಷಧಾರಿ ಸಂತೋಷ್ ಹಿಲಿಯಾಣ ಇವರಿಗೆ ಅವರ ಅಭಿಮಾನಿ ಬಳಗ ಇದೇ ಮಾ.23ರಂದು ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಸಹ ಕಲಾವಿದ ಪ್ರಸಾದ್ ಸವಣೂರು ತಿಳಿಸಿದ್ದಾರೆ. ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಲಿಯಾಣ ಬೆಳ್ಳಿಯಾನ’ ಶೀರ್ಷಿಕೆಯಲ್ಲಿ ಈ ಸಾರ್ವಜನಿಕ ಅಭಿನಂದನಾ ಸಮಾರಂಭ ಮಾ. 23ರಂದು ಮಧ್ಯಾಹ್ನ 2.30ರಿಂದ ಮಂದಾರ್ತಿ ಶೇಡಿಕೊಡ್ಲು ಶ್ರೀದುರ್ಗಾ ಸನ್ನಿಧಿ ಸಭಾಭವನದಲ್ಲಿ ನಡೆಯಲಿದೆ ಎಂದರು. ಸಂಜೆ 5 […]