ನ. 17ರಂದು ನೂತನ‌ ಕುಡಿಯುವ ನೀರಿನ‌ ಸಂಸ್ಕರಣ ಘಟಕ ಶುಭಾರಂಭ

ಉಡುಪಿ: ಆಸ್ಟ್ರೇಲಿಯಾದ ಪ್ರತಿಷ್ಟಿತ ಪಾನೀಯ ಉತ್ಪಾದನಾ ಸಂಸ್ಥೆ ‘ಫೋಸ್ಟರ್‌’ ಬ್ರಹ್ಮಾವರದ ಆರೂರಿನಲ್ಲಿ ಆರಂಭಿಸಿರುವ ನೂತನ ಕುಡಿಯುವ ನೀರಿನ ಸಂಸ್ಕರಣಾ ಘಟಕ ನ. 17ರಂದು ಶುಭಾರಂಭಗೊಳ್ಳಲಿದೆ ಎಂದು ಮಹಾಮಂತ್ರ ಪ್ರೊಡಕ್ಷನ್ಸ್‌ನ ಪಾಲುದಾರ ವಿವೇಕ್‌ ಸುವರ್ಣ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕರ್ನಾಟಕದಲ್ಲಿ ಫೋಸ್ಟರ್‌ ಸಂಸ್ಥೆಯ ಅಧಿಕೃತ ಉತ್ಪಾದನೆ ಮತ್ತು ಮಾರಾಟದ ಜವಾಬ್ದಾರಿಯನ್ನು ಮಹಾಮಂತ್ರ ಪ್ರೊಡಕ್ಷನ್ಸ್‌ ವಹಿಸಿಕೊಂಡಿದೆ. ಅಂದು ಸಂಜೆ 7.30ಕ್ಕೆ ಉಡುಪಿ ಕಿದಿಯೂರು ಹೋಟೆಲ್‌ನ ಶೇಷಶಯನ ಸಭಾಂಗಣದಲ್ಲಿ ನೀರಿನ ಘಟಕದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು. ಶಾಸಕ ಕೆ. […]