ಅಂಚೆ ಮುದ್ರೆಯಲ್ಲಿ ವಿಜೃಂಭಿಸಲಿದೆ ಚಿಕ್ಕಮಗಳೂರಿನ ಕಾಫಿ ತೋಟಗಳು.

ಚಿಕ್ಕಮಗಳೂರು: ಚಿಕ್ಕಮಗಳೂರಿನ ಕಾಫಿ ತೋಟಗಳ ಚಿತ್ರವನ್ನು ಹೊಂದಿರುವ ಶಾಶ್ವತ ಚಿತ್ರ ಸಹಿತ ಅಂಚೆ ಮೊಹರು ಚಿಕ್ಕಮಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ ಬಿಡುಗಡೆಗೊಂಡಿತು. ಚಿಕ್ಕಮಗಳೂರು ವಿಭಾಗದ ಅಂಚೆ ಅಧೀಕ್ಷಕರಾದ ಶ್ರೀನಾಥ್ ಎನ್.ಬಿ. ಅವರು ಈ ವಿಶೇಷ ಮೊಹರನ್ನು ಬಿಡುಗಡೆಗೊಳಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದಿನಿಂದ ಈ ಮೊಹರು ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಲಭ್ಯವಿದೆ. ಗ್ರಾಹಕರು, ಅಂಚೆ ಚೀಟಿ ಸಂಗ್ರಾಹಕರು ತಮ್ಮ ಪತ್ರಗಳ ಮೇಲೆ ಈ ವಿಶೇಷ ಅಂಚೆ ಮುದ್ರೆಯನ್ನು ಪಡೆಯಬಹುದಾಗಿದೆ ಅಥವಾ ಈ ಮುದ್ರೆಯನ್ನು ಹೊಂದುವ ಪತ್ರಗಳನ್ನು ರವಾನಿಸಬಹುದಾಗಿದೆ. […]