ಉಡುಪಿ: ಪೂರ್ಣಿಮಾ ಸುರೇಶ್ ಅವರ “ಮಧ್ಯಮಾವತಿ” ಕವನ ಸಂಕಲನ ಲೋಕಾರ್ಪಣೆ
ಉಡುಪಿ: ಅಮೋಘ ಹಿರಿಯಡಕ ಇದರ ಆಶ್ರಯದಲ್ಲಿ ನಗರದ ಎಂಜಿಎಂ ಕಾಲೇಜಿನ ಗೀತಾಂಜಲಿ ಮಂದಿರದಲ್ಲಿ ಭಾನುವಾರ ಪೂರ್ಣಿಮಾ ಸುರೇಶ್ ಅವರ ಮಧ್ಯಮಾವತಿ ಕವನ ಸಂಕಲನ ಲೋಕಾರ್ಪಣೆ ಮಾಡಲಾಯಿತು. ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಯುವ ಜನತೆ ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದ ಸಂಸ್ಕೃತಿ ಇಲಾಖೆಯಿಂದ ಮುಂದಿನ ದಿನಗಳಲ್ಲಿ ಯುವ ಬರಹಗಾರರ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದರು. ಕವನ ಎಂಬುದು ಮನಸ್ಸಿನ ಭಾವನೆ, ನೋವು, ನಲಿವು, ವೇದನೆಗಳನ್ನು […]