ಪರ್ಯಾಯ ಉತ್ಸವ: ಕೃಷ್ಣ ನಗರಿಯ ಸ್ವಚ್ಛತೆ ಕಂಡು ಸಾರ್ವಜನಿಕರು ಫುಲ್ ಖುಷ್

ಉಡುಪಿ: ಅದಮಾರು ಪರ್ಯಾಯ ಉತ್ಸವದ ಮೆರವಣಿಗೆ ಮುಕ್ತಾಯಗೊಳ್ಳುತ್ತಿದ್ದಂತೆ ನಗರಸಭೆಯ‌ ಪೌರಕಾರ್ಮಿಕರು ಹಾಗೂ ಸ್ವಯಂ ಸೇವಕರು ಮೆರವಣಿಗೆ ಸಾಗಿಬಂದ ರಸ್ತೆಗಳನ್ನು ಸ್ವಚ್ಛಗೊಳಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಅದಮಾರು ಮಠದ ಈಶಪ್ರಿಯ ಶ್ರೀಗಳು ಈಗಾಗಲೇ ಮುಂದಿನ ಎರಡು ವರ್ಷಗಳ ಪರ್ಯಾಯ ಅವಧಿಯಲ್ಲಿ ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಿದ್ದಾರೆ. ಅದರಂತೆ‌ ಪುರಪ್ರವೇಶ, ಹೊರೆಕಾಣಿಕೆ ಹಾಗೂ ಪರ್ಯಾಯ ಮೆರವಣಿಗೆಯಲ್ಲಿ ಪ್ಲಾಸ್ಟಿಕ್‌ ಬ್ಯಾನರ್‌ ಬದಲು ಬಟ್ಟೆ ಬ್ಯಾನರ್‌ಗಳನ್ನು ಉಪಯೋಗಿಸಲಾಗಿತ್ತು. ಹಾಗೆಯೇ ಬಾಳೆಗಿಡಗಳನ್ನು ಬೇರು ಸಮೇತ ಕಿತ್ತುತಂದು ಸ್ವಾಗತ ಕಮಾನುಗಳಲ್ಲಿ ಅಲಂಕಾರಗೊಳಿಸಿ […]