ನನ್ನ ಸ್ಪರ್ಧೆ ಪಕ್ಷ ಅಥವಾ ವ್ಯಕ್ತಿಯ ವಿರುದ್ಧ ಅಲ್ಲ, ಜನ ಪ್ರತಿನಿಧಿಯಾಗಿ ಸೇವೆ ಮಾಡಲು ಮಾತ್ರ.

ಉಡುಪಿ: ಬಿಜೆಪಿಗಾಗಿ ಈ ಹಿಂದೆ ಜಿಲ್ಲಾದ್ಯಂತ ಸಂಚರಿಸಿ ಸಂಘಟಿಸಿದ್ದೇನೆ. ಈಗ ಪಕ್ಷ ಟಿಕೆಟ್ ನಿರಾಕರಿಸಿದೆ. ಆದರೂ ನನ್ನ ಸ್ಪರ್ಧೆ ಪಕ್ಷ ಅಥವಾ ವ್ಯಕ್ತಿಯ ವಿರುದ್ಧ ಅಲ್ಲ ಜನ ಪ್ರತಿನಿಧಿಯಾಗಿ ಸೇವೆ ಮಾಡಲು ಮಾತ್ರ ಎಂದು ಪಕ್ಷೇತರ ಅಭ್ಯರ್ಥಿ ಕೆ. ರಘುಪತಿ ಭಟ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಈ ಚುನಾವಣೆಗೆ ಸ್ಪರ್ಧಿಸದಿದ್ದರೆ ಮುಂದೆ ಚುನಾವಣೆ ರಾಜಕಾರಣದಲ್ಲಿ ಇರಲು ಸಾಧ್ಯವಾಗದು. ಕರಾವಳಿ, ಮಲೆನಾಡು ಭಾಗದಲ್ಲಿ ಪ್ರವಾಸ ಮಾಡಿದ್ದೇನೆ ಮತ್ತು ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಜಾತಿ, ಮತ, ಧರ್ಮ ಬಿಟ್ಟು ಎಲ್ಲರೂ ನಮ್ಮೊಂದಿಗೆ […]