ಉಡುಪಿ: ನಗರಸಭೆ- ರಸ್ತೆ ಅಗೆತ ನಿಷೇಧ

ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಟೆಲಿಫೋನ್, ವಿದ್ಯುತ್ ಕೇಬಲ್, ಕುಡಿಯುವ ನೀರು, ಒಳಚರಂಡಿ ಕೊಳವೆ ಇತ್ಯಾದಿಗಳನ್ನು ಅಳವಡಿಸಲು ರಸ್ತೆ ಅಗೆತವನ್ನು ಅಕ್ಟೋಬರ್ 15 ರ ವರೆಗೆ ನಿಷೇಧಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.