ಅಶಕ್ತ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆರ್ಥಿಕ ಸಹಾಯ

ಉಡುಪಿ ಏ.22: ಪ್ರಸ್ತುತ ಕೋವಿಡ್-19 ರೋಗಾಣುವಿನಿಂದ ಇಡೀ ರಾಜ್ಯ ಲಾಕ್ ಡೌನ್ ಆಗಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರು, ಸಾಹಿತಿಗಳಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆರ್ಥಿಕ ಸಹಾಯ ಮಾಡಲು ನಿರ್ಧರಿಸಲಾಗಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಎಲ್ಲಾ ಕಲಾ ಪ್ರಕಾರದ ಕಲಾವಿದರು/ಸಾಹಿತಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವೃತ್ತಿ ನಿರತರಾಗಿದ್ದು ಕನಿಷ್ಠ 10 ವರ್ಷ ಕಲಾಸೇವೆ ಮಾಡಿರಬೇಕು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾಸಾಶನ ಪಡೆಯುತ್ತಿರಬಾರದು ಮತ್ತು ಯಾವುದೇ ಸರಕಾರಿ (ರಾಜ್ಯ/ಕೇಂದ್ರ/ನಿಗಮ/ಮಂಡಳಿ/ಸರ್ಕಾರಿ ಅನುದಾನಿತ ಸಂಸ್ಥೆಗಳು ಮತ್ತು ಅರೆ ಸರ್ಕಾರಿ ಸಂಸ್ಥೆಗಳು.) […]