ಶರಣಾದರೆ ನಂಬಿದ ಜನರಿಗೆ ಮೋಸ ಮಾಡಿದಂತೆ

ಉಡುಪಿ: ರಾಜ್ಯದ 6 ಮಂದಿ ಪ್ರಮುಖ ನಕ್ಸಲರು ಬುಧವಾರ ಶರಣಾಗತಿ‌ ಆಗಿದ್ದಾರೆ. ಆದರೆ ಕರ್ನಾಟಕದಲ್ಲಿ ತೀವ್ರಗಾಮಿ ನಕ್ಸಲ್‌ ಚಟುವಟಿಕೆಯ ನಾಯಕ ಎಂದೆನಿಸಿ ಕೊಂಡಿದ್ದ, ಇತ್ತೀಚೆಗೆ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ವಿಕ್ರಂ ಗೌಡ ಶರಣಾಗತಿಗೆ ನಿರಾಕರಿಸಿದ್ದ ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ. 2024ರ ನ. 19ರಂದು ನಕ್ಸಲ್‌ ನಾಯಕ ವಿಕ್ರಂ ಗೌಡನನ್ನು ಹೆಬ್ರಿ ಸಮೀಪದ ಕಾಡಿನಲ್ಲಿ ಎನ್‌ಕೌಂಟರ್‌ ಮಾಡಲಾಗಿತ್ತು. ಅದಕ್ಕೂ ಒಂದೂವರೆ ತಿಂಗಳ ಹಿಂದೆ ವಿಕ್ರಂ ಗೌಡನಿಗೆ ಶರಣಾಗುವಂತೆ ಕೆಲವು ಸಂಘಟನೆಗಳು ಹಾಗೂ ಸ್ಥಳೀಯರ ಮೂಲಕ ಮನವೊಲಿಸುವ ಪ್ರಯತ್ನವನ್ನು […]