ರಾಷ್ಟ್ರಕವಿ ಗೋವಿಂದ ಪೈಗಳ ಸಂಶೋಧನೆ, ಬರಹಗಳು ಅಧ್ಯಯನಶೀಲರಿಗೆ ಪ್ರೇರಣೆ

ಉಡುಪಿ: ರಾಷ್ಟ್ರಕವಿ ಗೋವಿಂದ ಪೈಗಳ ಸಂಶೋಧನೆ, ಬರಹಗಳು ಅಧ್ಯಯನಶೀಲರಿಗೆ ಪ್ರೇರಣೆ. ಅಧಿಕೃತ ಮತ್ತು ಮೂಲ ಆಕರಗಳನ್ನು ಇಟ್ಟುಕೊಂಡು ಬರೆದ ಅಪರೂಪದ ಸಾಹಿತಿ. ಸೃಜನಾತ್ಮಕ ಕ್ಷೇತ್ರಕ್ಕೂ ಗೋವಿಂದ ಪೈಗಳ ಕೊಡುಗೆ ದೊಡ್ಡದು. ಅವರು ಬರೆದ ದ್ರಾವಿಡ ಲಯದ ಹಾಡುಗಳು ಸಾಹಿತ್ಯದ ಮೈಲಿಗಲ್ಲು ಎಂದು ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಹೇಳಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ […]