ಉಡುಪಿ: ಜೂನ್ 15ರಂದು ಮಿಶನ್ ಆಸ್ಪತ್ರೆಯಲ್ಲಿ ‘ಇನ್ಸ್ಪಾಯರ್’ ಗ್ರೀನ್ ಹಾಸ್ಪಿಟಲ್ ಯೋಜನೆಗೆ ಚಾಲನೆ

ಉಡುಪಿ: ಕಳೆದ ಒಂದು ಶತಮಾನದಿಂದ ಉಡುಪಿ ಪರಿಸರದ ಆರೋಗ್ಯ ರಕ್ಷಣೆಯ ಮೂಲಾಧಾರವಾಗಿದ್ದ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ, ಇದೀಗ ‘ಇನ್ಸ್ ಪಾಯರ್’ ಗ್ರೀನ್ ಹಾಸ್ಪಿಟಲ್ ಯೋಜನೆಯನ್ನು ಆರಂಭಿಸುವುದರೊಂದಿಗೆ ಹವಮಾನ ಬದಲಾವಣೆಯನ್ನು ನೀಗಿಸುವ ಪ್ರಕ್ರಿಯೆಗೆ ಮುಂದಾಗಿದೆ. ಇನ್ಸ್ ಪಾಯರ್ ಯೋಜನೆಗೆ ಇದೇ ಜೂನ್ 15ರಂದು ಬೆಳಿಗ್ಗೆ 11ಗಂಟೆಗೆ ಆಸ್ಪತ್ರೆ ಆವರಣದಲ್ಲಿ ನಡೆಯಲಿರುವ ಸಂಸ್ಥೆಯ 101 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಚಾಲನೆ ಸಿಗಲಿದೆ. ಈ ಕುರಿತು ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತನ್ನ […]