ಉಡುಪಿ:ಎಚ್.ಎನ್.ಶೃಂಗೇಶ್ವರ ನಿಧನ

ಉಡುಪಿ:ನಿಟ್ಟೂರು ಪ್ರೌಢಶಾಲೆಯ ನಿವೃತ್ತ ಅಧ್ಯಾಪಕರೂ, ಯಕ್ಷಗಾನ ಕಲಾರಂಗದ ಜೊತೆ ಕಾರ್ಯದರ್ಶಿಯೂ ಆದ ಎಚ್. ಎನ್. ಶೃಂಗೇಶ್ವರ (63) ಶುಕ್ರವಾರ ಮುಂಜಾನೆ ಅಲ್ಪಕಾಲದ ಅಸೌಖ್ಯ ದಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತಃ ಕೊಪ್ಪ ತಾಲೂಕಿನ ಮೇಗೂರಿನವರಾದ ಶೃಂಗೇಶ್ವರ್, ಬಾಲ್ಯದಲ್ಲಿ ಉಡುಪಿಗೆ ಬಂದು ಇಲ್ಲಿಯೆ ಬದುಕು ಕಟ್ಟಿಕೊಂಡವರು. ಪದವಿಯ ಬಳಿಕ ತಿರುಪತಿಯಲ್ಲಿ ಬಿಎಡ್ ಪದವಿ ಪಡೆದು ನಿಟ್ಟೂರು ಪ್ರೌಢ ಶಾಲೆಯಲ್ಲಿ ಸಂಸ್ಕೃತ- ಕನ್ನಡ ಅಧ್ಯಾಪಕರಾಗಿ ಮೂರು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿ ಮೂರು ವರ್ಷಗಳ ಹಿಂದೆ ನಿವೃತ್ತರಾಗಿದ್ದರು. […]