ಉಡುಪಿ: ದುಶ್ಚಟಮುಕ್ತ ಸಮಾಜಕ್ಕಾಗಿ ಬೃಹತ್ ಜನಜಾಗೃತಿ ಜಾಥಾಗೆ ಚಾಲನೆ

ಉಡುಪಿ: ದುಶ್ಚಟ ಮುಕ್ತ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಡಾ. ವಿರೇಂದ್ರ ಹೆಗ್ಗಡೆಯವರು ಕೈಗೊಂಡಿರುವ ಬಹುಮುಖ್ಯ ಕಾರ್ಯಕ್ರಮ ಜನಜಾಗೃತಿಯ ಮೂಲಕ ಸಮಾಜದಲ್ಲಿ ಮುಖ್ಯವಾಗಿ ದುರ್ಬಲ ವರ್ಗದಲ್ಲಿ ದುಶ್ಚಟಗಳಿಂದ ಉಂಟಾಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸುವುದು. ಇದಕ್ಕಾಗಿ ಸಮಾಜದ ಗಣ್ಯರ ಸಹಭಾಗಿತ್ವವುಳ್ಳ ರಾಜ್ಯ ಮಟ್ಟದ ಜನಜಾಗೃತಿ ವೇದಿಕೆಯನ್ನು ಸ್ಥಾಪಿಸಲಾಗಿದೆ. ಕಳೆದ 21 ವರ್ಷಗಳಿಂದ ಉಡುಪಿ ಜಿಲ್ಲೆಯಾದ್ಯಂತ ಮದ್ಯಪಾನ, ದುಶ್ಚಟ, ಮಾದಕ ವಸ್ತುಗಳ ವಿರುದ್ಧ ಆಂದೋಲನ ಜಾಗೃತಿ, ಮನಪರಿವರ್ತನೆ ಮಾಡುವ ಜನಜಾಗೃತಿ ಕಾರ್ಯಕ್ರಮವು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಉಡುಪಿ […]