ಮಣಿಪಾಲ: ವಿದ್ಯಾರ್ಥಿಗಳ ರೂಮ್ ಗೆ ನುಗ್ಗಿ ಲ್ಯಾಪ್ ಟಾಪ್, ಐಪ್ಯಾಡ್ ಕಳ್ಳತನ; ಇಬ್ಬರ ಬಂಧನ

ಉಡುಪಿ: ಮಣಿಪಾಲ ಠಾಣೆ ವ್ಯಾಪ್ತಿಯ ವಿದ್ಯಾರತ್ನನಗರದ ಅಪಾರ್ಟೆಂಟ್ ವೊಂದರಲ್ಲಿ ಎರಡು ಲ್ಯಾಪ್ ಟಾಪ್ ಮತ್ತು ಐಪಾಡ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ಪೆರುಮಾಳ್ ನಿವಾಸಿ ಪಿ ಕಾರ್ತಿಕ್ (28) ಮತ್ತು ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ಬಾಲನ್ (34) ಬಂಧಿತ ಆರೋಪಿಗಳು. ಆರೋಪಿಗಳಿಂದ ಸುಮಾರು 4,00,000 ರೂ. ಮೌಲ್ಯದ ಎರಡು ಲ್ಯಾಪ್ ಟಾಪ್ ಮತ್ತು 1 ಆಪಲ್ ಕಂಪನಿಯ ಐಪಾಡ್ ನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರು ಮಣಿಪಾಲದ […]