“ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ” – ಕರ್ನಾಟಕ ಆಯ್ಕೆಗೆ ನಾಮ ನಿರ್ದೇಶನ ಆಹ್ವಾನ
ಉಡುಪಿ: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ ಮಹಾತ್ಮಗಾಂಧೀ ಸೇವಾ ಪ್ರಶಸ್ತಿ-ಕರ್ನಾಟಕ ಗೆ 2024 ನೇ ಸಾಲಿಗೆ ಅರ್ಹ ಸಾಧಕರನ್ನು ಅಥವಾ ಸಂಘಸಂಸ್ಥೆಗಳನ್ನು ಆಯ್ಕೆ ಮಾಡಲು ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ. ಸಾರ್ವಜನಿಕ ಜೀವನದಲ್ಲಿ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಅಳವಡಿಸಿಕೊಂಡು ಜೀವನ ನಡೆಸುತ್ತಿರುವ ಕನಿಷ್ಠ 60 ವರ್ಷಗಳಾಗಿರುವ ವ್ಯಕ್ತಿಗಳು ಅಥವಾ 25 ವರ್ಷಗಳು ತುಂಬಿರುವ ಸೇವಾ ಸಂಸ್ಥೆಗಳನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುವುದು.ಪ್ರಶಸ್ತಿಯನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಯನ್ನು ರಚಿಸಲಾಗುವುದು. […]