ಉಡುಪಿ ಶ್ರೀಕೃಷ್ಣಮಠದಲ್ಲಿ ಮಧ್ವನವಮಿ ಉತ್ಸವದ ವೈಭವ

ಉಡುಪಿ: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಮಧ್ವನವಮಿ ಉತ್ಸವ ವೈಭವದಿಂದ ನಡೆಯಿತು. ಮಧ್ವನವಮಿ ಪ್ರಯುಕ್ತ ಪಾರಾಯಣ, ಮಧುಅಭಿಷೇಕ ಮಾಡಲಾಯಿತು. ಇನ್ನು ಅನಂತೇಶ್ವರ ದೇವಾಲಯದ ಆವರಣದಲ್ಲಿರುವ ಆಚಾರ್ಯ ಮಧ್ವರ ಸನ್ನಿಧಾನದಲ್ಲಿ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿ ಆಚಾರ್ಯ ಮಧ್ವರಿಗೆ ದಂಡೋದಕವನ್ನು ನೀಡಿದರು. ಈ ವೇಳೆ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಅವರಿಂದ ವಿಷ್ಣು ಸಹಸ್ರನಾಮ ಚಿಂತನೆ ಮತ್ತು ವಿಪ್ರರಿಂದ ಪಾರಾಯಣ ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ನಡೆಯಿತು. ಆಚಾರ್ಯ ಮಧ್ವರು ಹನುಮಂತ ದೇವರ […]