ಲಂಚ ಸ್ವೀಕರಿಸುವ ವೇಳೆ ಲೋಕಾಯಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ, ಜೂನಿಯರ್‌ ಇಂಜಿನಿಯರ್‌.

ಕಿನ್ನಿಗೋಳಿ: ಕಾಮಗಾರಿಯೊಂದಕ್ಕೆ ಸಂಬಂಧಿಸಿದಂತೆ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಹಾಗೂ ಜೂನಿಯರ್‌ ಇಂಜಿನಿಯರ್‌ ಲಂಚ ಸ್ವೀಕರಿಸುವ ಸಂದರ್ಭ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಸೆ19 ರಂದು ಸಂಜೆ ನಡೆದಿದೆ. ಪಿಡಬ್ಲ್ಯೂಡಿ ಕಾಸ್ಟ್‌-1 ಗುತ್ತಿಗೆದಾರರೊಬ್ಬರು 15ನೇ ಹಣಕಾಸು ಯೋಜನೆಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಎಸ್‌ ಕೋಡಿ ಸರಕಾರಿ ಕೆರೆ ಅಭಿವೃದ್ಧಿಪಡಿಸುವ ಕಾಮಗಾರಿ ಗುತ್ತಿಗೆ ಕೆಲಸವನ್ನು ನಿರ್ವಹಿಸಿದ್ದು, ಕಾಮಗಾರಿಯ 9,77,154 ರೂ.ಮೊತ್ತದ ಬಿಲ್ ಮಂಜೂರಾತಿಯ ಬಗ್ಗೆ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ಜೂನಿಯರ್ ಇಂಜಿನಿಯರ್‌ ನಾಗರಾಜು ಅವರಲ್ಲಿ ವಿಚಾರಿಸಿದಾಗ ಬಿಲ್ […]