ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿ ದೀಪದ ಬದಲು ದೊಂದಿ ಬೆಳಕು: ಕರ್ನಾಟಕ ರಕ್ಷಣಾ ವೇದಿಕೆಯಿಂದ ವಿಭಿನ್ನ ಪ್ರತಿಭಟನೆ
ಉಡುಪಿ: ಕರಾವಳಿ ಬೈಪಾಸ್ ನಿಂದ ಅಂಬಾಗಿಲು ಜಂಕ್ಷನ್ ವರೆಗೆ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯ ಕೆಟ್ಟು ಹೋಗಿರುವ ದಾರಿ ದೀಪಗಳನ್ನು ಶೀಘ್ರವೇ ದುರಸ್ತಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಉಡುಪಿ ನಾಗರಿಕರು ಭಾನುವಾರ ರಾತ್ರಿ ದೊಂದಿ ಹಾಗೂ ಚಿಮಣಿ ಬೆಳಕು ಉರಿಸುವ ಮೂಲಕ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ದಾರಿ ದೀಪಗಳನ್ನು ಸರಿಪಡಿಸುವವರೆಗೆ ಕರಾವಳಿ ಬೈಪಾಸ್ ನಿಂದ ಅಂಬಾಗಿಲು ಜಂಕ್ಷನ್ ವರೆಗೆ ದೊಂದಿ ಅಥವಾ ಚಿಮಣಿ ದೀಪ ಅಳವಡಿಸಿ ಪಾದಚಾರಿಗಳಿಗೆ ಬೆಳಕು […]