ಶಿಕ್ಷಕ, ಉದ್ಯಮಿ, ಸಾಮಾಜಿಕ ಧುರೀಣ ಬೆಂಜಮಿನ್ ಡಿ ಸೊಜಾ ನಿಧನ.

ಶಿಕ್ಷಣ, ಉದ್ಯಮ ಮತ್ತು ಸಮಾಜ ಸೇವೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಕೆಲರಾಯ್‌ನ ಬೆಂಜಮಿನ್ ಡಿ ಸೊಜಾ(ವಯಸ್ಸು 75 ) ಇವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ದಿ। ಜೊನ್ ಮತ್ತು ದಿ।ಪಿಯಾದ್ ಡಿಸೊಜಾ ದಂಪತಿಯ ಹನ್ನೆರಡು ಮಕ್ಕಳಲ್ಲಿ ಕೊನೆಯವರಾದ ಬೆಂಜಮಿನ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೆಲರಾಯ್ ಸಂತ ಜೋಕಿಮ್ ಶಾಲೆಯಲ್ಲಿ ಪೂರೈಸಿ, ಫ್ರೌಡಶಾಲೆಯಿಂದ ಪದವಿಯ ವರೆಗೆ ಮಂಗಳೂರಿನ ಸಂತ ಅಲೋಶಿಯಸ್ ಸಂಸ್ಥೆಯಲ್ಲಿ ಕಲಿತು, ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಶಿಕ್ಷಣ ಪದವಿ ಹಾಗೂ ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ರಾಜಕೀಯ ಶಾಸ್ತ್ರದಲ್ಲಿ […]