ಕುಂದಾಪುರದ ತ್ರಾಸಿ ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ( ಗಗನದಲ್ಲಿ ಊಟ) ತಾಣವಾಗಲಿದೆ

ಕುಂದಾಪುರ:ಪಣಂಬೂರು ಬೀಚ್‌ ಬಳಿಕ ಕುಂದಾಪುರದ ತ್ರಾಸಿಯ ಕಡಲ ಕಿನಾರೆಯು ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ (ಗಗನದಲ್ಲಿ ಊಟ) ತಾಣ ವಾಗಲಿದೆ. ನೆಲ ಮಟ್ಟದಿಂದ ಸುಮಾರು 60-70 ಅಡಿ ಎತ್ತರದಲ್ಲಿ ತ್ರಾಸಿ- ಮರವಂತೆ ಕಡಲು- ಸೌಪರ್ಣಿಕಾ ನದಿ ಮಧ್ಯೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಅತ್ಯದ್ಭುತ ಸೊಬಗನ್ನು ಕಣ್ತುಂಬಿಕೊಳ್ಳುವ ಜತೆಗೆ, ರುಚಿಕರವಾದ ತಿನಿಸುಗಳನ್ನು ಸವಿಯುವ ಅವಕಾಶ ಇದಾಗಿದೆ. ಉಡುಪಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಯಿಂದ ಕಾರ್ಯಾದೇಶ ನೀಡಲಾಗಿದ್ದು, ಅದಕ್ಕೆ ಬೇಕಾದ ಅನುಮತಿ, ಸುರಕ್ಷೆ ಕ್ರಮಗಳ ಪರಿಶೀಲನೆಯೂ ಆಗಿದೆ. ಇದಕ್ಕೆ […]