ಕುಂದಾಪುರ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಮೃತ್ಯು.
![](https://udupixpress.com/wp-content/uploads/2024/02/death-1.png)
ಕುಂದಾಪುರ: ಹಟ್ಟಿಯಂಗಡಿ ರೈಲ್ವೇ ಸೇತುವೆ ಬಳಿ ವಿದ್ಯುತ್ ಕಂಬದ ಬುಡದಲ್ಲಿ ವ್ಯಕ್ತಿಯೊಬ್ಬರು ರೈಲು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದ ಘಟನೆ ನಡೆದಿದೆ. ವೋಕಾ -ಎರ್ನಾಕುಲಂ ರೈಲಿನ ಲೋಕೋ ಪೈಲಟ್ ಅಂಕುಲ್ ಎಮ್. ಮೂಡ್ಲಕಟ್ಟೆ ರೈಲ್ವೇ ಸ್ಟೇಷನ್ನಲ್ಲಿ ಮಾಹಿತಿ ನೀಡಿದ ಮೇರೆಗೆ ಪರಿಶೀಲಿಸಿದಾಗ ಅಬ್ಬಿಗುಡ್ಡಿಯ ನಾಗೇಶ್ ಅವರ ಮುಖಕ್ಕೆ ರೈಲು ಢಿಕ್ಕಿಯಾಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.