ಉಡುಪಿ: ಸಮಾನ ಮನಸ್ಕರ ತಂಡದಿಂದ 25ನೇ ಮನೆ ಹಸ್ತಾಂತರ
ಉಡುಪಿ: ಸಮಾನ ಮನಸ್ಕರ ತಂಡ ಉಡುಪಿ ಇವರಿಂದ ಅಗತ್ಯವುಳ್ಳ ಬಡವ ಮಹಿಳೆ ಲಕ್ಷ್ಮೀ ಅವರಿಗಾಗಿ ನಿರ್ಮಿಸಿಕೊಟ್ಟಿರುವ 25ನೇ ಮನೆಯ ಹಸ್ತಾಂತರ ಕಾರ್ಯಕ್ರಮ ಕುಕ್ಕೆಹಳ್ಳಿಯಲ್ಲಿ ಜರುಗಿತು. ನಿವೃತ್ತ ಲೋಕಾಯುಕ್ತ ಡಾ. ಸಂತೋಶ್ ಹೆಗ್ಡೆ 25 ನೇ ಮನೆಯನ್ನು ಹಸ್ತಾಂತರಿಸಿ ಮಾತನಾಡಿ, ಇದೊಂದು ಸುಂದರ ಹಾಗೂ ಅರ್ಥಪೂರ್ಣವಾದ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಮಾನವೀಯ ಮೌಲ್ಯವನ್ನು ಬಿತ್ತಲು ಸಹಕಾರಿಯಾಗುತ್ತದೆ. ಜೀವನದಲ್ಲಿ ಮಾನವೀಯತೆಯನ್ನು ಅಳವಡಿಕೊಂಡಾಗ ಒಳ್ಳೆಯ ಮನುಷ್ಯರಾಗಬಹುದು. ಈ ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದರು. ತಂಡದ ಮುಖ್ಯಸ್ಥರಾದ ಶಶಿಧರ […]