ಕೋವಿಡ್-19 ನಿಂದ ನಷ್ಠ: ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪರಿಹಾರ

ಉಡುಪಿ, ಜೂನ್ 4: ಕೋವಿಡ್-19 ರ ಕಾರಣ ದೇಶದಲ್ಲಿ ವಿದಿಸಿರುವ ಲಾಕ್ ಡೌನ್ ನಿಂದ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ  ಉಂಟಾದ ನಷ್ಟಕ್ಕೆ ಹೆಕ್ಟೇರ್ ಗೆ ರೂ. 15,000 ಪರಿಹಾರವನ್ನು ಗರಿಷ್ಟ 1.00 ಹೆಕ್ಟೇರ್ ವಿಸ್ತೀರ್ಣಕ್ಕೆ ಘೋಷಿಸಲಾಗಿದೆ. ಅದರಂತೆ ಉಡುಪಿ ಜಿಲ್ಲೆಯಲ್ಲಿ ಬಾಳೆ, ಅನಾನಸ್ಸು, ಕಲ್ಲಂಗಡಿ ಹಾಗೂ ಕರಬೂಜ ಬೆಳೆಗಳಿಗೆ ಪರಿಹಾರ ನೀಡಲು ಅವಕಾಶ ಕಲ್ಲಿಸಲಾಗಿರುತ್ತದೆ. ಅನಾನಸ್ಸು ಬೆಳೆಗೆ ಸಂಬಂದಿಸಿದಂತೆ 2019-20 ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಬೆಳೆ ಸಮೀಕ್ಷೆಯ ಅನುಗುಣವಾಗಿಪರಿಹಾರವನ್ನು ವಿತರಿಸಲಾಗುವುದು. ಆಯ್ಕೆಯಾಗುವ ರೈತರ […]