ಉಡುಪಿ ಕೃಷ್ಣಮಠದಲ್ಲಿ ವೈಭವದ ಮೂರು ತೇರಿನ ಉತ್ಸವ ಸಂಪನ್ನ

ಉಡುಪಿ: ಕಡಗೋಲು ಕೃಷ್ಣನ ಉಡುಪಿಯಲ್ಲಿ ಮಕರ ಸಂಕ್ರಾಂತಿಯ ಮೂರು ತೇರಿನ ಉತ್ಸವ ಅತ್ಯಂತ ವೈಭವದಿಂದ ನೆರವೇರಿತು. ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಭಕ್ತರ ಸಂಭ್ರಮ ಕಡಿಮೆಯಾದರೂ, ಉತ್ಸವದ ವೈಭವ ಮಾತ್ರ ಕುಂದಲಿಲ್ಲ. ಈ ಬಾರಿ ಸ್ಥಳೀಯ ಕೃಷ್ಣ ಭಕ್ತರು ಮಾತ್ರವಲ್ಲದೆ ವಿದೇಶದ ಅತಿಥಿಗಳು ಕೂಡ ಉತ್ಸವಕ್ಕೆ ಸಾಕ್ಷಿಯಾದರು. ಹೌದು, ಕಡಕೋಲು ಹಿಡಿದು ನಿಂತ ಉಡುಪಿ ಕೃಷ್ಣನಿಗೆ ಮಕರ ಸಂಕ್ರಾಂತಿಯ ದಿನ ಪ್ರತಿಷ್ಠಾ ಉತ್ಸವದ ವಿಶೇಷ. ಮಕರ ಸಂಕ್ರಾಂತಿಯಂದೇ ಆಚಾರ್ಯ ಮಧ್ವರು, ಕೃಷ್ಣದೇವರನ್ನು ಪ್ರತಿಷ್ಠಾಪಿಸಿದರು. ಹಾಗಾಗಿ ಸಪ್ತೋತ್ಸವ ಸಹಿತ ಕೃಷ್ಣನಿಗೆ […]