ಜುಲೈ 25ರಿಂದ ಉಡುಪಿಯಲ್ಲಿ ಭಂಡಾರಕೇರಿ ಮಠಾಧೀಶರಾದ ವಿದ್ವೇಶತೀರ್ಥ ಶ್ರೀಪಾದರ 45ನೇ ಚಾರ್ತುಮಾಸ್ಯ ವೃತ

ಉಡುಪಿ: ಉಡುಪಿಯ ಭಂಡಾರಕೇರಿ ಮಠಾಧೀಶರಾದ ವಿದ್ವೇಶತೀರ್ಥ ಶ್ರೀಪಾದರು ಜುಲೈ 25ರಿಂದ ಸೆಪ್ಟೆಂಬರ್ 18ರ ವರೆಗೆ ಉಡುಪಿ ರಥಬೀದಿಯಲ್ಲಿರುವ ಭಂಡಾರಕೇರಿ ಮಠದಲ್ಲಿ 45ನೇ ಚಾರ್ತುಮಾಸ್ಯ ವೃತವನ್ನು ಕೈಗೊಳ್ಳಲಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ದಿವಾನರಾದ ನಾಗರಾಜ್ ಆಚಾರ್ಯ ತಿಳಿಸಿದರು. ಉಡುಪಿ ಕೃಷ್ಣಮಠದ ಕನಕ ಮಂಟಪದಲ್ಲಿ ಇಂದು‌ ನಡೆದ ಸುದ್ದಿಗೋಷ್ಠಿಯಲ್ಲಿ ಅವರು‌ ಮಾಹಿತಿ ನೀಡಿದರು. ಈ‌ ಅವಧಿಯಲ್ಲಿ ಶ್ರೀಗಳಿಂದ ಮಠದಲ್ಲಿ ದಿನನಿತ್ಯ ಪಟ್ಟದ ದೇವರ ಪೂಜೆ, ಧಾರ್ಮಿಕ ವಾಠ-ಪ್ರವಚನ, ಧಾರ್ಮಿಕ ಉಪನ್ಯಾಸಗಳು ನಡೆಯಲಿವೆ. ಹಾಗೆ, ಉಡುಪಿ ಸುತ್ತಮುತ್ತಲಿನ ಭಕ್ತರ ಮನೆಗಳಲ್ಲಿ […]