ಕುಂದಾಪುರ ಶ್ರೀಮಾತಾ ಆಸ್ಪತ್ರೆಯ ಮಾಲೀಕ ಡಾ.ಸತೀಶ ಪೂಜಾರಿ ಹೃದಯಾಘಾತದಿಂದ ನಿಧನ

ಉಡುಪಿ: ಕುಂದಾಪುರ ಶ್ರೀಮಾತಾ ಆಸ್ಪತ್ರೆಯ ಆಡಳಿತ ಪಾಲುದಾರ, ಖ್ಯಾತ ಇ.ಎನ್.ಟಿ. ತಜ್ಞ ಡಾ.ಸತೀಶ ಪೂಜಾರಿ ಸಾಸ್ತಾನ ಅವರು ಗುರುವಾರ ಮುಂಜಾನೆ ಹೃದಯಾಘಾತದಿಂದ ಕೋಟ ಮಣೂರು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 52 ವಯಸ್ಸಾಗಿತ್ತು. ಇವರು ಕುಂದಾಪುರ ಶ್ರೀಮಾತಾ ಆಸ್ಪತ್ರೆ, ಕೋಟ ಮನಸ್ಮಿತಾ ಫೌಂಡೇಶನ್ ಮೊದಲಾದ ಸಂಸ್ಥೆಗಳ ಆಡಳಿತ ಪಾಲುದಾರರಾಗಿದ್ದರು. ಹವ್ಯಾಸಿ ಗಾಯಕರಾಗಿದ್ದ ಇವರು ಹಲವಾರು ಆಲ್ಬಂ ಸಾಂಗ್ ಗಳಿಗೆ, ಭಕ್ತಿಗೀತೆಗಳಿಗೆ ಧ್ವನಿಯಾಗಿದ್ದರು. ಸಂಗೀತ ರಸಮಂಜರಿಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಬಿಲ್ಲವ ಯುವ ವೇದಿಕೆಯ ಸ್ಥಾಪಕ ಅಧ್ಯಕ್ಷರಾಗಿದ್ದರು. ಡಾ. ಎಸ್. […]