ತನುಮನ ಸೆಳೆಯಿತು ಕುಮಾರಿ ವಸುಂಧರಾ ಅವರ ಅದ್ಬುತ ನಾಟ್ಯ ಪ್ರಸ್ತುತಿ!

ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ “ನೃತ್ಯಶಂಕರ” ಸರಣಿ 55ರಲ್ಲಿ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತಮಂಟಪದಲ್ಲಿ ವಿದುಷಿ ಕು| ವಸುಂಧರಾ ರವರು ತನ್ನ ನೃತ್ಯಾಭಿನಯನದ ಮೂಲಕ ಪೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾದರು. ನಾಟ್ಯಾಧಿ ದೇವತೆಯಾದ ಶಿವನಿಗೆ ಹೂ, ಮೈ, ಮನಗಳನ್ನು ಅರ್ಪಿಸಿ ದೇವತೆಗಳಿಗೆ ಗುರುಗಳಿಗೆ ತಂದೆ-ತಾಯಿಯರಿಗೆ ನಮಸ್ಕರಿಸಿ ಬಂದಂತ ಎಲ್ಲಾ ಕಲಾಭಿಮಾನಿಗಳನ್ನು ಸ್ವಾಗತಿಸುವ ಪುಷ್ಪಾಂಜಲಿ ಮೂಲಕ ನೃತ್ಯ ಪ್ರಾರಂಭಿಸಿದರು. ಪದವರ್ಣ ಪ್ರಸ್ತುತಿಯಲ್ಲಿ ವರ್ಣವನ್ನು ವಿಭಿನ್ನವಾಗಿ ಚಿತ್ರಿಸಲಾಗಿದೆ. ಇಲ್ಲಿ ರುಕ್ಮಿಣಿಯು ತನ್ನ […]