ಶ್ರೀ ಕೃಷ್ಣ ಮಠ:ಕಿಶೋರ ಯಕ್ಷಗಾನ ಸಂಭ್ರಮ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಯಕ್ಷಗಾನ ಕಲಾರಂಗ, ಉಡುಪಿ,ಯಕ್ಷಶಿಕ್ಷಣ ಟ್ರಸ್ಟ್(ರಿ) ಉಡುಪಿ ಇದರ ಕಿಶೋರ ಯಕ್ಷಗಾನ ಸಂಭ್ರಮವನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ನಿ.ಬಿ.ವಿಜಯ ಬಲ್ಲಾಳ್,ವಿಶ್ವನಾಥ್ ಶೆಣೈ ಹಾಗೂ ಮಠದ ದಿವಾನರಾದ ವೇದವ್ಯಾಸ ತಂತ್ರಿ ಗಳವರು ಉಪಸ್ಥಿತರಿದ್ದರು.ಎಸ್.ವಿ.ಭಟ್ ರವರು ಸ್ವಾಗತಿಸಿ ಎಂ.ಗಂಗಾಧರ್ ರಾವ್ ಧನ್ಯವಾದ ಸಮರ್ಪಿಸಿದರು.ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ […]