ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘದ “ಶತಾಭಿವಂದನಂ” ಕಾರ್ಯಕ್ರಮದ ಸಮಾರೋಪದ ಆಮಂತ್ರಣ ಪತ್ರಿಕೆ ಬಿಡುಗಡೆ
ಉಡುಪಿ: ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘದ ಶತಮಾನೋತ್ಸವ ಆಚರಣೆಯ “ಶತಾಭಿವಂದನಂ- 2023” ಕಾರ್ಯಕ್ರಮದ ಸಮಾರೋಪ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕೆಮ್ಮಣ್ಣುವಿನ ದಿ. ರಾಜಗೋಪಾಲ್ ಭಟ್ ವೇದಿಕೆಯಲ್ಲಿ ನಡೆಯಿತು.ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಸಾಮಾಜಿಕ ಚಿಂತಕ ವಾಗ್ಮಿ ದಾಮೋದರ್ ಶರ್ಮಾ ಅವರು, ಆರ್ಥಿಕ ವ್ಯವಹಾರದ ಜೊತೆಗೆ ಮಾನವೀಯತೆ, ಪ್ರೀತಿ, ನಂಬಿಕೆ, ವಿಶ್ವಾಸ, ಗೌರವ ಇದೆಲ್ಲವೂ ಮೇಳೈಸಿದರೆ ಮಾತ್ರ ಆ ವ್ಯವಹಾರಕ್ಕೆ ಬೆಲೆ ಇರುತ್ತದೆ. ಇಲ್ಲದಿದ್ದರೆ ವ್ಯವಹಾರಕ್ಕೆ ಬೆಲೆ ಬರುವುದಿಲ್ಲ. ಈ ಸಂಸ್ಥೆ ಆರ್ಥಿಕ ವ್ಯವಹಾರದಲ್ಲಿ […]